FacebookFacebook TwitterTwitter WhatsAppWhatsApp LinkedInLinkedIn MojMoj InstagramInstagram TelegramTelegram EmailEmail ShareChatShareChat PinterestPinterest RedditReddit Copy URLCopy URL
Home Service Product About Us Contact Menu

ಇಂದಿನ ರಾಶಿ ಭವಿಷ್ಯ (01-09-2024)

 

 

ಮೇಷ ರಾಶಿ

 

  ದಿನ ಭವಿಷ್ಯ (01 - 09 - 2024)  

 

(ಚು, ಚೆ, ಚೋ, ಲಾ, ಲೀ, ಲು, ಲೆ, ಲೋ, ಆ)

 

ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ವಹಿಸಬೇಕು. ವೃತ್ತಿಪರ ಕೆಲಸಗಳಲ್ಲಿ, ಅಧಿಕಾರಿಗಳೊಂದಿಗೆ ಜಾಗರೂಕರಾಗಿರಬೇಕು.  ದೈವಿಕ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುತ್ತೀರಿ. ಸಂಬಂಧಿಕರೊಂದಿಗೆ ಅನಿರೀಕ್ಷಿತ ವಾದ ವಿವಾದಗಳು ಉಂಟಾಗುತ್ತವೆ. ವ್ಯಾಪಾರಿಗಳಿಗೆ ತೊಂದರೆ ಉಂಟಾಗುತ್ತದೆ. ನಿರುದ್ಯೋಗ ಪ್ರಯತ್ನಗಳು ನಿರಾಶಾದಾಯಕವಾಗಿರುತ್ತವೆ.

 

ಅದೃಷ್ಟದ ದಿಕ್ಕು:ಉತ್ತರ

 

ಅದೃಷ್ಟದ ಸಂಖ್ಯೆ:3

 

ಅದೃಷ್ಟದ ಬಣ್ಣ:ಹಳದಿ

 

---------------------------------------

---------------------------------------

 

ವೃಷಭ ರಾಶಿ

 

(ಇ, ಓ, ಎ, ಒ, ವಾ, ವಿ, ವು, ವೆ, ವೊ)

 

ಆಸ್ತಿ ವಿವಾದಗಳಲ್ಲಿ ಹೊಸ ಒಪ್ಪಂದಗಳು ಆಗುತ್ತವೆ. ಮೌಲ್ಯದ  ವಸ್ತು ಮತ್ತು ವಾಹನಗಳನ್ನು ಖರೀದಿಸಲಾಗುತ್ತದೆ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ಬಾಲ್ಯದ ಸ್ನೇಹಿತರೊಂದಿಗೆ  ಸೌಹಾರ್ದತೆಯಿಂದ ವರ್ತಿಸುತ್ತೀರಿ. ವಿದ್ಯಾರ್ಥಿಗಳು ವಿದೇಶಿ ಪ್ರಯಾಣ ಪ್ರಯತ್ನಗಳಲ್ಲಿ ಪ್ರಮುಖ ಮಾಹಿತಿಯನ್ನು ಪಡೆಯುತ್ತಾರೆ.

 

ಅದೃಷ್ಟದ ದಿಕ್ಕು:ದಕ್ಷಿಣ

 

ಅದೃಷ್ಟದ ಸಂಖ್ಯೆ:5

 

ಅದೃಷ್ಟದ ಬಣ್ಣ:ಕಿತ್ತಳೆ

 

---------------------------------------

---------------------------------------

 

ಮಿಥುನ ರಾಶಿ

 

(ಕಾ, ಕೀ, ಕೂ, ಘ, ಛ, ಕೆ, ಕೊ, ಹ)

 

ಉದರ ಸಂಬಂಧಿ ಖಾಯಿಲೆಗಳು ನೋವುಂಟು ಮಾಡುತ್ತವೆ. ವ್ಯಾಪಾರಸ್ಥರಿಗೆ ನಿರಾಸೆಯ ವಾತಾವರಣವಿರುತ್ತದೆ. ಕೈಗೊಂಡ ಕೆಲಸಗಳು ಮುಂದೆ ಸಾಗುವುದಿಲ್ಲ. ಮನೆಯ ವಾತಾವರಣವು ಕಿರಿಕಿರಿಯುಂಟುಮಾಡುತ್ತದೆ. ಪ್ರಯಾಣವನ್ನು ಮುಂದೂಡುವುದು ಉತ್ತಮ. ಉದ್ಯೋಗದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ.

 

ಅದೃಷ್ಟದ ದಿಕ್ಕು:ಪಶ್ಚಿಮ

 

ಅದೃಷ್ಟದ ಸಂಖ್ಯೆ:4

 

ಅದೃಷ್ಟದ ಬಣ್ಣ:ನೀಲಿ

 

---------------------------------------

---------------------------------------

 

ಕರ್ಕ ರಾಶಿ

 

(ದಾ, ದೇ, ದು, ದೇ, ದೋ,  ಹೂ, ಹೆ, ಹೋ)

 

ಮನೆಯ ವಾತಾವರಣ  ಸಂಭ್ರಮದಿಂದ ಕೂಡಿರುತ್ತದೆ. ವ್ಯಾಪಾರಿಗಳು ಸಕಾಲದಲ್ಲಿ ಹೂಡಿಕೆಯನ್ನು ಸ್ವೀಕರಿಸುತ್ತಾರೆ.  ಅಗತ್ಯಕ್ಕೆ ಆಪ್ತ ಸ್ನೇಹಿತರ ಸಹಾಯ ಪಡೆಯುತ್ತೀರಿ. ಸ್ಥಿರಾಸ್ತಿ ವಿಷಯಗಳಲ್ಲಿ ಅಡಚಣೆಗಳು ನಿವಾರಣೆಯಾಗುತ್ತವೆ. ಹೊಸ ವಾಹನ ಯೋಗವಿದೆ, ಉದ್ಯೋಗಿಗಳಿಗೆ ದೀರ್ಘಾವಧಿಯ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ.

 

ಅದೃಷ್ಟದ ದಿಕ್ಕು:ಈಶಾನ್ಯ

 

ಅದೃಷ್ಟದ ಸಂಖ್ಯೆ:5

 

ಅದೃಷ್ಟದ ಬಣ್ಣ:ಕೆಂಪು

 

---------------------------------------

---------------------------------------

 

ಸಿಂಹ ರಾಶಿ

 

(ಮಾ, ಮೀ, ಮೂ, ಮೊ, ಟಾ, ಟೀ, ಟೂ, ಟೆ)

 

ಹಠಾತ್ ಪ್ರಯಾಣದ ಸೂಚನೆಗಳಿವೆ. ಸಂಬಂಧಿಕರೊಂದಿ ಭಿನ್ನಭಿಪ್ರಾಯಗಳು ಉಂಟಾಗುತ್ತವೆ. ಆರೋಗ್ಯ ಕಾರಣಗಳಿಗಾಗಿ ವೈದ್ಯಕೀಯ ಸಮಾಲೋಚನೆ ಅಗತ್ಯವಿದೆ. ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ವ್ಯಾಪಾರಸ್ಥರಿಗೆ ಗೊಂದಲದ ಪರಿಸ್ಥಿತಿಗಳಿರುತ್ತವೆ. ಉದ್ಯೋಗಿಗಳು ಹೆಚ್ಚುವರಿ ಜವಾಬ್ದಾರಿಗಳನ್ನು ಹೊಂದಿರುತ್ತಾರೆ.

 

ಅದೃಷ್ಟದ ದಿಕ್ಕು:ಪಶ್ಚಿಮ

 

ಅದೃಷ್ಟದ ಸಂಖ್ಯೆ:8

 

ಅದೃಷ್ಟದ ಬಣ್ಣ:ಹಳದಿ

 

---------------------------------------

---------------------------------------

 

ಕನ್ಯಾ ರಾಶಿ

 

(ಪಾ, ಪೀ, ಪೂ, ಷ, ಣ , ಪೆ , ಪೊ)

 

ವೃತ್ತಿ ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸುತ್ತೀರಿ. ದೈವಿಕ ಚಿಂತನೆ ಹೆಚ್ಚಾಗುತ್ತದೆ. ಆರಂಭಿಸಿದ ಹೊಸ ವ್ಯಾಪಾರಗಳು ಲಾಭವನ್ನು ಪಡೆಯುತ್ತವೆ. ಉದ್ಯೋಗ ಪ್ರಯತ್ನಗಳಲ್ಲಿ ಯಶಸ್ಸು ಸಿಗುತ್ತದೆ. ಸಮಾಜದಲ್ಲಿ ಪರಿಚಯಗಳು ಹೆಚ್ಚಾಗುತ್ತವೆ.  ಉದ್ಯೋಗಿಗಳು  ಕೆಲಸ ಒತ್ತಡ ಹೆಚ್ಚಾದರು ನಿಧಾನವಾಗಿ ಪೂರ್ಣಗೊಳಿಸುತ್ತೀರಿ.

 

ಅದೃಷ್ಟದ ದಿಕ್ಕು:ಪೂರ್ವ

 

ಅದೃಷ್ಟದ ಸಂಖ್ಯೆ:3

 

ಅದೃಷ್ಟದ ಬಣ್ಣ:ಬೂದು

 

---------------------------------------

---------------------------------------

 

ತುಲಾ ರಾಶಿ

 

(ರಾ, ರೀ, ರೂ, ರೆ, ರೊ, ತಾ, ತೀ, ತೂ, ತೆ)

 

ವಾಹನ ವ್ಯಾಪಾರಿಗಳು  ವಿಶೇಷ ಲಾಭವನ್ನು ಪಡೆಯುತ್ತೀರಿ. ಸ್ಥಿರಾಸ್ತಿಗಳನ್ನು ಖರೀದಿಸುತ್ತೀರಿ. ದೇವಸ್ಥಾನಕ್ಕೆ ಭೇಟಿ ನೀಡುತ್ತೀರಿ .  ಆತ್ಮೀಯ ಸ್ನೇಹಿತರೊಂದಿಗೆ ಸಾಮರಸ್ಯದಿಂದ ವ್ಯವಹರಿಸುತ್ತೀರಿ. ಹಣಕಾಸಿನ ಪ್ರಗತಿ  ಉಂಟಾಗುತ್ತದೆ. ಉದ್ಯೋಗಿಗಳಿಗೆ ಅಧಿಕಾರಿಗಳ ನೆರವಿನಿಂದ ಹೊಸ ಅವಕಾಶಗಳು ಸಿಗುತ್ತವೆ.

 

ಅದೃಷ್ಟದ ದಿಕ್ಕು:ಆಗ್ನೇಯ

 

ಅದೃಷ್ಟದ ಸಂಖ್ಯೆ:6

 

ಅದೃಷ್ಟದ ಬಣ್ಣ:ನೀಲಿ

 

---------------------------------------

---------------------------------------

 

ವೃಶ್ಚಿಕ ರಾಶಿ

 

(ತೊ, ನಾ, ನೀ, ತೊ, ನಾ, ನೀ, ನೆ, ನೊ, ಯಾ, ಯೀ, ಯೂ)

 

ಪ್ರಯಾಣದಲ್ಲಿ ಅಡೆತಡೆಗಳು ಉಂಟಾಗುತ್ತದೆ, ಕುಟುಂಬ ಸದಸ್ಯರ ಒತ್ತಡ ಹೆಚ್ಚಾಗುತ್ತದೆ.  ವ್ಯಾಪಾರದಲ್ಲಿ ಅಲ್ಪ ಲಾಭ ದೊರೆಯುತ್ತದೆ. ಸಂಬಂಧಿಕರು ಮತ್ತು ಸ್ನೇಹಿತರು ನಿಮ್ಮ ಮಾತಿಗೆ  ಒಪ್ಪುವುದಿಲ್ಲ.  ಉದ್ಯೋಗದ  ವಾತಾವರಣವು ಗೊಂದಲಮಯವಾಗಿರುತ್ತದೆ. ಆರ್ಥಿಕ ವಾತಾವರಣ  .

 

ಅದೃಷ್ಟದ ದಿಕ್ಕು:ಉತ್ತರ

 

ಅದೃಷ್ಟದ ಸಂಖ್ಯೆ:5

 

ಅದೃಷ್ಟದ ಬಣ್ಣ:ನೇರಳೆ

 

---------------------------------------

---------------------------------------

 

ಧನು ರಾಶಿ

 

(ಥೆ, ಯೊ, ಭಾ, ಭೀ, ಭೂ, ಧಾ, ಫಾ, ಢಾ, ಭೆ)

 

  ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ವ್ಯಾಪಾರ-ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಸಹೋದರರೊಂದಿಗೆ ಸ್ಥಿರಾಸ್ತಿಯ ವಿವಾದಗಳಿರುತ್ತವೆ.   ಆಗತ್ಯಯಕ್ಕೆ ಕೈಯಲ್ಲಿ ಹಣ ಇರುವುದಿಲ್ಲ. ಉದ್ಯೋಗಿಗಳು ಸಹೋದ್ಯೋಗಿಗಳೊಂದಿಗೆ  ಭಿನ್ನಾಭಿಪ್ರಾಯಗಳಿರುತ್ತವೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

 

ಅದೃಷ್ಟದ ದಿಕ್ಕು:ನೈಋತ್ಯ

 

ಅದೃಷ್ಟದ ಸಂಖ್ಯೆ:7

 

ಅದೃಷ್ಟದ ಬಣ್ಣ:ಹಳದಿ

 

---------------------------------------

---------------------------------------

 

ಮಕರ ರಾಶಿ

 

(ಭೊ, ಜಾ, ಜೀ, ಖೀ, ಖೂ, ಖೆ, ಖೊ, ಗಾ, ಗೀ)

 

ಬೆಲೆಬಾಳುವ ವಸ್ತುಗಳನ್ನು ಖರೀದಿಸುತ್ತೀರಿ. ವ್ಯವಹಾರಗಳಲ್ಲಿ ನಿರೀಕ್ಷಿತ ಬದಲಾವಣೆಗಳು ಕಂಡುಬರುತ್ತವೆ. ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ. ಕೈಗೊಂಡ ಕೆಲಸದಲ್ಲಿ  ಕಾರ್ಯ ಸಿದ್ಧಿ ಉಂಟಾಗುತ್ತದೆ.  ಉದ್ಯೋಗದ ವಾತಾವರಣವು ಶಾಂತಿಯುತವಾಗಿರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಯೋಗವಿದೆ.

 

ಅದೃಷ್ಟದ ದಿಕ್ಕು:ಉತ್ತರ

 

ಅದೃಷ್ಟದ ಸಂಖ್ಯೆ:4

 

ಅದೃಷ್ಟದ ಬಣ್ಣ:ಕಿತ್ತಳೆ

 

---------------------------------------

---------------------------------------

 

ಕುಂಭ ರಾಶಿ

 

(ಗೂ, ಗೆ, ಗೊ, ಸಾ, ಸೀ, ಸೂ, ಸೊ, ದಾ)

 

ಮಿತ್ರರಿಂದ  ಶುಭ ಸುದ್ದಿ ದೊರೆಯುತ್ತದೆ. ಭೂ ವಿವಾದಗಳು ಬಗೆಹರಿಯುತ್ತವೆ. ವೃತ್ತಿ ಮತ್ತು ವ್ಯವಹಾರಗಳು ಅಭಿವೃದ್ಧಿ ಹೊಂದುತ್ತವೆ. ಆರ್ಥಿಕ ಸಮೃದ್ಧಿ  ಉಂಟಾಗುತ್ತದೆ. ನಿರುದ್ಯೋಗಿಗಳ ನಿರೀಕ್ಷೆಗಳು ನಿಜವಾಗುತ್ತವೆ. ಉದ್ಯೋಗಿಗಳಿಗೆ ತಮ್ಮ ಪ್ರತಿಭೆಗೆ ಉತ್ತಮ ಮನ್ನಣೆ ದೊರೆಯುತ್ತದೆ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ.

 

ಅದೃಷ್ಟದ ದಿಕ್ಕು:ಪಶ್ಚಿಮ

 

ಅದೃಷ್ಟದ ಸಂಖ್ಯೆ:5

 

ಅದೃಷ್ಟದ ಬಣ್ಣ:ಬೂದು

 

---------------------------------------

---------------------------------------

 

ಮೀನ ರಾಶಿ

 

(ದೀ, ದೂ, ಥ, ಝ, ದೆ, ದೊ, ಚಾ, ಚೀ)

 

ವ್ಯರ್ಥ ಖರ್ಚುಗಳು ಹೆಚ್ಚಾಗುತ್ತದೆ. ಪ್ರಮುಖ ಕಾರ್ಯಗಳು ಮುಂದೂಡಲ್ಪಡುತ್ತವೆ. ಬಂಧುಗಳೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತದೆ ಮತ್ತು ಅನಾರೋಗ್ಯದ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಉಂಟಾಗುತ್ತದೆ. ಪ್ರಯಾಣದಲ್ಲಿ ಹಠಾತ್ ಬದಲಾವಣೆಗಳಿರುತ್ತವೆ. ವ್ಯಾಪಾರಿಗಳಿಗೆ ನಿರಾಸೆಯ ವಾತಾವರಣವಿರುತ್ತದೆ.  ಉದ್ಯೋಗದಲ್ಲಿ ಪರಿಸ್ಥಿತಿಗಳು ಅಷ್ಟು ಅನುಕೂಲಕರವಾಗಿರುವುದಿಲ್ಲ.

 

ಅದೃಷ್ಟದ ದಿಕ್ಕು:ದಕ್ಷಿಣ

 

ಅದೃಷ್ಟದ ಸಂಖ್ಯೆ:4

 

ಅದೃಷ್ಟದ ಬಣ್ಣ:ನೀಲಿ

 

---------------------------------------

---------------------------------------

2024-09-01 00:22:59